Monday, September 10, 2012ಓಮ್ಮೆ ಬಾರೋ ನನ್ನುರಿಗೆ....

ಚೆಲ್ವೆ ಸಖನೆ,
ಏನ್ ಮಾಡ್ತಿದಿಯ...ನೀನ್ ಏನ್ ಮಾಡ್ತಿಯಲ್ಲ ಜೀವ ಇರದ ಆ ಕಂಪ್ಯುಟರ್ ಮುಂದೆ ಕೂತು ಏನೊ ಒತ್ತುತ್ತಿರುತ್ತಿಯ....ಅಲ್ಲ ಮಾರಯ  ಜೀವ ಇಲ್ಲದ ಅ ವಸ್ತುವಿನ ಮೇಲೆ ನಿನಗದೆಸ್ಟು ಮೋಹ ...ಆದ್ರೆ ಇಪ್ಪತ್ನಾಕು ವರುಷಗಳಿಂದ ನೀನಗಾಗೆ
ನಿನಗೊಸ್ಕರ ಅಂತಾನೆ ಕಾಯುತ್ತಿರೊ ಈ ನಿನ್ನ ಮೀರಾ ಮೇಲೆ ಯಾಕಿಲ್ಲ    ಮೋಹ....ಒಂದತ್ತು ನಿಜ ನನ್ಗು ಕಾದು ಕಾದು ಸಾಕಾಗಿ ಹೊಗಿದೆ ಇನ್ನು ಅದೆಷ್ಟು ದಿನ ಅಂತ ಹೀಗೆ ಕಾಯಲಿ ನೀನೆ ಹೇಳು,:(ಬರೊಲ್ಲ ಅನ್ನೊದಾದ್ರೆ ಹೀಳಿ ಬಿಡು ಪಕ್ಕದೂರಿನಲ್ಲಿ ಯಾವುದೊ ಸ್ವಾಮಿಜಿ ಆಶ್ರಮ ಶುರು ಮಾಡಿದ್ದರಂತೆ ಅಲ್ಲಿ ಹೋಗಿ ಸೇರುಕ್ಕೊಂಡ್ ಬಿಡ್ತಿನಿ :(  ಪ್ರತಿ ದಿನ ದೇವಸ್ಥಾನಕ್ಕೆ ಹೋಗಿ ಬರೊ ಅಮ್ಮನದು ಒಂದೆ ಗೋಳು ಅದ್ಯಾರದೊ ಮಗಳಿಗೆ ಮದ್ವೆ ಅಯಿತಂತೆ, ಇನ್ನಾರೊ ಮಗನಿಗೆ ಹುಡಗಿ ಸಿಕ್ಕಿತ್ತಂತೆ ಆದನ್ನು ಅದೆಷ್ಟು ಚೆಂದ ಹೇಳ್ತಾರೆ ನಿನ್ನ ಭಾವಿ ಅತ್ತೆ ಅಂದ್ರೆ ಅದೇ ಕಾಣೆ ಮೊನ್ನೆ ನಿಮ್ಮ್ ದೊಡ್ಡಪ್ಪ ಹೇಳಿದ್ರಲ್ಲ ಅ ಹುಡಗನೆ, ಹುಡಗಿ ಬೆಂಗಳುರಲ್ಲಿ ಇರೊದಂತ್ತೆ...ನೋಡು ನೀನು ಹೂ ಅಂದ್ದ್ರೆ  ಇಷ್ಟತ್ತಿಗೆ ಮದವೆನೆ ಆಗಿರೊದೆನೊ ಅಂತ ಹೇಳುತ್ತ ಸೀರೆ ಸೆರಗಿನ ಅಂಚಿಂದ  ಮೂಗೊರೆಸುತ್ತ ಒಳಗೆ ಹೊಗೊದನ್ನ ದಿನ ನೋಡೀ ಬೇಜಾರಗಿ ಹೊಗಿದೆ.ಆದ್ರು ನೀನಗಾಗಿ ಕಾಯೊದ್ರಲ್ಲಿ ಅದೇನೊ ಸಂತೊಷ ಇರೊದಂತು ನಮ್ಮುರ ಈಶ್ವರನ ಮೇಲಾಣೆ...ನಿಜ:)

 ನನಾಗಗಿ ಅಲ್ಲವಾದರು...ಈ ಊರಿನ ಶೀತ ಗಾಳಿಯನ್ನ ಮನಸಾರೆ ಹೀರೊದಕ್ಕಾಗಿ...ಆ ತುಂಗೆಯ ಪಾತ್ರೆಯಲ್ಲಿ ನಿನ್ನ ಕಾಲುಗಳನ್ನ ಇಳಿಬಿಟ್ಟು ನಿನ್ನ ಜೀವನದ ಜಾಂಜಾಟಗಳನ್ನ ತೋಳೆದು ಹಾಕುವುದಕ್ಕಾಗಿ..ಮಲಂದೂರಿನ ಆ ದಟ್ಟ ಕಾಡಲ್ಲಿ ಒಮ್ಮೇ ಕಳೆದು ಹೋಗೊದಕ್ಕಾಗಿ..ಅ ಬರ್ಕಣ ಪಾಲ್ಸ್, ಬೊರ್ಗರೆವ ಶಬ್ದದಲ್ಲಿ ಮುಳುಗಿಹೊಗೊದಕ್ಕಗಿ...ಮುಂಜಾನೆ ನನ್ನ ಮನೆಯಂಗಳದಿಂದ ಬರೊ ಅ ಮಲ್ಲಿಗೆಯ ಸುವಾಸನೆಯನ್ನ ಸವಿಯುದಕ್ಕಾಗಿ....ಅ ಮುಂಜಾವಿನಲ್ಲಿ ಬೈಲು ಗುಡ್ಡದ ಪೊದೆಯೊಳಗಿಂದ ಇಂಪಾಗಿ ಕೇಳಿ ಬರೊ ಅ ಕೊಗಿಲೆಯ ಗಾನವನ್ನ ಆನಂದಿಸುವುದಕ್ಕಾಗಿ....ಆ ದಿನವಿಡೀ ಸೂರಿಯೊ ಮಳೆಯನ್ನ ಅನುಭವಿಸುದಕ್ಕಾಗಿ ಆದರು ಬೇಗ ಬರಬಾರದಾ mmmm....


ಕೆಲವೊಮ್ಮೆ ಇ ಇಳಿಸಂಜೆ ಹೊತ್ತಲ್ಲಿ ನನ್ನ ಒಂಟಿತನ ಎನ್ನೊದು ತುಂಬ ಕಾಡಿಬಿಡುತ್ತೆ....ನಿನ್ನ ಸಾಮಿಪ್ಯ ತೀರ ಅನಿವಾರ್ಯ ಆಗಿದೆ ಅನ್ನಿಸಿ ಬಿಡುತ್ತೆ...ನನ್ನೊಟ್ಟಿಗೆ ನೀ ಇರೊದೆ ಆಗಿದ್ರೆ ಮಳೆ ನಿಂತ ಮರುಹೊತ್ತು ನಿನನ್ನ ಗದ್ದೆ ಬೈಲಿಗೆ ಕರ್ಕ್ಕೊಂಡೆ ಹೋಗಿ ಅಡ್ಡದಿಡ್ಡಿ ಹೊಗೊ ಅಂಚಿನಲ್ಲಿ ತಪ್ಪು ತಪ್ಪು ಹೆಜ್ಜೆ ಇಟ್ಟು ಬೀಳೊ ನಾಟಕವಾಡಿ ಭಯದಲ್ಲಿ      ನಿನ್ನ ಬೀಗಿದಪ್ಪಿ ನಿಟ್ಟುಸಿರು ಬಿಡಬೇಕಿತ್ತು ಅದನ್ನ  ನೋಡಿ ನೀನು ಏನೊ ಕಿವಿಯಲ್ಲಿ ಹೇಳ ಬೇಕಿದೆ ಅದನ್ನ ಕೇಳಿ ತೂ  ಪೋಲಿ ಎಂದು ನೂಕಿ ಮತ್ತೋಮ್ಮೆ ಬಿಗಿದಪ್ಪಿ  ನಿನ್ನ ಖಾಲಿ ಇರೊ ತೊಳುಗಳಲ್ಲಿ ಬಂದಿಯಾಗಬೇಕು,ಅದನ್ನ ಅಲ್ಲೆ ಯಾವುದೊ ಮರದ ಮರೆಯಿಂದ ಅ ಬೆಳ್ಳಕ್ಕಿ ಹಿಂಡುಗಳು..ಪಕ್ಕದಲ್ಲೆ ಇರೊ ಅಂಜುರ ಮರದ ಸಂದಿಯಿಂದ ಆ ಮರಿ ಅಳಿಲು...ಅ ತುದಿಯ ಕಾಲುವಿಯ ಬದಿಯಲ್ಲಿ ಕುಳಿತಿರೊ ಗೊಂಗ್ರ ಕಪ್ಪೆ...ಅಲ್ಲೆ ಮೆಲ್ದಂಡೆ ಮೇಲಿನ ಪೊದೆಯಲ್ಲಿ ಬಚ್ಚಿಟ್ಟುಕೊಂಡಿರೊ ಕೇಂಬೂತ ಇವರೆಲ್ಲರು ನಮ್ಮನ್ನ ಕದ್ದು ಮುಚ್ಚಿ ನೋಡೊದು ಗೊತ್ತಿದ್ದು ಗೊತ್ತಿಲ್ಲದ ಹಾಗೆ ಇನ್ನು ನಿನ್ನ ಬಿಗಿಯಾಗಿ ಅಪ್ಪಿಕೊಂಡು ಇ ಜಗತ್ತನ್ನ ಮತ್ತೊಮ್ಮೆ ಮರೆತು ಹೋಗ ಬೇಕೇನಿಸಿದೆ:)


ಇನ್ನು ಅದೆಷ್ಟು ದಿನ ತಗೊತ್ತಿಯ ಬರೊದಕ್ಕೆ...ಓ ರಜೆ ಸಿಕ್ತಿಲ್ವ..ಹೇಳು ನಿಮ್ ಮ್ಯಾನೆಜರ್ ಗೆ ಗೆಳತಿ ಇದ್ದಳೆ ಸಹ್ಯಾದ್ರಿ ಕಣಿವೆಯಲ್ಲಿ ಒಬ್ಬಳೆ ಕಾಯ್ತ ಇರ್ತಳೆ ಅಂತ ಕಳುಹಿಸಿ ಕೊಂಡ್ತರೆ...ಹ್ಮಾ ಇನ್ನೊಂದು ವಿಷಯ ಹೇಳೊದಕ್ಕೆ ಮರತೆ ಮೊನ್ನೆ ಒಂದು ಕಾಲ್ಗೆಜ್ಜೆ ತಗೊಂಡೆ..ಅದರ ಜೊತೆ ಹೊಸದೊಂದು ಸಲ್ವರ್ ಕೂಡ...ಸಿಟಿಯಲ್ಲಿ ಜೀನ್ಸ್, ಟೀ ಶರ್ಟ್ ಹಾಕಿರೋ ಹುಡಗಿರ್ ನೊಡಿರೊ ನಿನ್ಗೆ ಬಹುಶಃ ನಾನು ಹೀಗಿರೊದು ಇಷ್ಟ ಆಗುತ್ತೊ ಇಲ್ವೊ ಆದ್ರೆ ನನ್ಗೆ ಹೀಗಿರೊಕೆ ಇಷ್ಟ...ಒಪ್ಪ್ಕೊತ್ತಿಯ ಅನ್ನೊ ಹುಚ್ಚು ನಂಬಿಕೆ ಮೇಲೆ ಕೆಲವೊಮ್ಮೆ ಕ್ಷಣಗಳನ್ನ ನೂಕಿ ಬಿಡುತ್ತೆನೆ ನೋಡು:)

ಹೇ ಹುಡುಗ ಇ ನನ್ನುಸಿರು ನಿನ್ನದೊಂದು ಪ್ರೀತಿಯ ಅಪ್ಪುಗೆಗಾಗಿ ಕಾತರಿಸುತ್ತಿವೆ... ನನ್ನ ಕೂದಲು ನಿನ್ನ ಮಮತೆ ತುಂಬಿದ ನೆವರಿಕೆಗಾಗಿ ಹಾತೊರೆಯುತ್ತಿವೆ,ನನ್ನ ಇ ಕೈ ಬೆರಳುಗಳು ನಿನ್ನ ಗುಂಗರು ಕೂದಲೆಳೆಗಳ ಎಣಿಕೆಗಾಗಿ...ನಾ ಮುಂದು ತಾ ಮುಂದು ಎನ್ನುತ್ತಿವೆ...  ಇವೆಲ್ಲ ಆಗ ಬೇಕು ಅಂದ್ರೆ ನೀನು ಇಲ್ಲಿಗೆ ಬರಲೆ ಬೇಕು.ಅದಕ್ಕಾಗಿಯೆ ಹೇಳಿದ್ದು ಒಮ್ಮೆ ಬಾರೊ ನನ್ನುರಿಗೆ...ಅ ಪಶ್ಚಿಮ ಘಟ್ಟಗಳ ಸಾಲಿನಲ್ಲಿ ಒಮ್ಮೆ ಕಳೆದು ಹೊಗೊಣ ಮತ್ತೆಂದು ಹಿಂದುರಿಗಿ ಬರದಷ್ಟು ದೂರಕ್ಕೆ...ಬರ್ತಿಯ ತಾನೆ...

ಇಂತಿ ನಿನ್ನೊಲಿಮೆಯ,
ಮೀರಾ


 

Monday, February 13, 2012

ನನ್ನೊಳಗೆ ಉಳಿದ ಮಾತು..

ಈ ನಡುವೆ ಆದ್ಯಾಕೊ ಒಂಟಿ ಆಗಿರೊಕೆ ಬೇಜಾರಗಿದೆ.ನಿನ್ನನ್ನ್ ಮೊದಲ ಬಾರಿ ಊರಿನ
ದಾರಿಯಲ್ಲಿ  ನೋಡು ಆಸೆ ಆಗ್ತಿದೆ.ನನ್ನ ಹತ್ರ ನಿನಗೆ ಅಂತ ಹೇಳಿ ಕ್ಕೊಳ್ಳೊಕೆ ತುಂಬ ವಿಷಯಗಳು ಹುಟ್ಟಿಕ್ಕೊಂಡು ಬಿಟ್ಟಿವೆ ಈಗ..ಆದೆಷ್ಟೊ ಭಾರಿ ಹೇಳಬೇಕು ಅಂದ್ಕೋಂಡ ಮಾತುಗಳು ಬಾಯಿಗೆ ಬರದೆ ಹೊಟ್ಟೆಯೊಳಗೆ ಕರಗಿ ಹೋಗಿದ್ದು ಉಂಟು..ಆದ್ರೆ ಕೆಲವೊಮ್ಮೆ ನಿನ್ನೆದುರು ಬಂದಾಗೆಲ್ಲ ಮಾತು ಮರೆತು ಹೊಗಿದ್ದು ಉಂಟು ಯಾಕೆ ಅಂತ ನಿನ್ಗು ಗೊಂತುಟ್ಟು ಅಲ್ವ...

ಈ ಮನುಷ್ಯನ ಭಾವನೆಗಳೆ ಹೀಗೆ ಅನ್ನಿಸುತ್ತೆ..ವಸ್ತು ಹತ್ತಿರದಲ್ಲಿರೊವಾಗ ಅದು ಬೇಡ ಅನ್ನಿಸಿ ಬಿಡುತ್ತೆ... ಆದ್ರೆ ಅದೇ ವಸ್ತು ದೂರ ಆಗುತ್ತೆ ಅಂತ ಗೊತ್ತದಾಗ ಎಲ್ಲಿಲ್ಲದ ವ್ಯಾಮೋಹ ಬಂದು ಬೀಡುತ್ತೆ.ಹಾಗೆ ನೀನು ಹತ್ತಿರ ಇದ್ದಾಗ ನನ್ಗೆ ನೀನು ಯಾವಗಲು ನನ್ನ ಜೊತೆನೆ ಇರ ಬೇಕೆನಿಸಿರಲಿಲ್ಲ ಆದ್ರೆ ಈಗ ನಿನ್ನ ಸಾಮಿಪ್ಯ ತುಂಬಾನೆ ಬೇಕು ಅನ್ನಿಸುತ್ತಿದೆ....ಸಾವಿರ ಮಾತುಗಳನ್ನ ನಿನ್ಗೆ ಹೇಳೋದಿದೆ...ಬೇಗ ಬಾರೊ..,
ಅದೆಷ್ಟೋ ಸಂಜೆಗಳು ನೀನಿಲ್ಲದೆ ಕಳೆದು ಹೊಗಿವೆ.ನನ್ನ ಮುದ್ದಿನ ಆಗುಂಬೆಯ ಹಾದಿ ಯಾಕೋ ಮೊದಲ ಸರಿ ಹೊಸದೆನು ಇಲ್ಲ  ಎಲ್ಲ ಹಳೆಯದೆ ಅನ್ನಿಸೊಕೆ ಶುರುವಾಗಿದೆ....

ಒಂದು ವೇಳೆ ನೀನು ನನ್ನ ಜೊತೆ ಈಗ ಇಲ್ಲಿ ಇರೊದೆ ಆಗಿದ್ರೆ ಇಳಿ ಸಂಜೆ ಹೊತ್ತಲ್ಲಿ ಒಂದ್ದಿಷ್ಟು ದೂರ ಮನೆ ಮುಂದಿನ ಉಬ್ಬದ ಇಳಿಜಾರಿನಲ್ಲಿ ನನ್ನ ಜೊತೆ ನಡೆದು ಬರ್ತಿಯ ಅಂತ ಕೇಳ ಬೇಕಿತ್ತು...ಉಬ್ಬದ ಇಳಿಜಾರು ಹಳೆಯದೆ ನನಗೇನು ಹೊಸದಲ್ಲ..ಆದರು ನೀನು ಜೊತೆಗಿದ್ದರೆ ಒಂದ್ದಿಷ್ಟು ತಲೆಹರಟೆಯ ಮಾತುಗಳನ್ನ ಆಡಿ..ದಡ್ಡಿ ನೀನು ಇಷ್ಟು ಚಿಕ್ಕ ವಿಷಯನು ಗೊತ್ತಿಲ್ವ ನಿನ್ಗೆ ಅಂತ ತಲೆ ಮೊಟಕಿಸಿಕ್ಕೊಳ್ಳೊ ಆಸೆ ಅಗಿದೆ...


ಕೆಲವೊಮ್ಮೆ ಅನ್ನಿಸಿದ್ದುಂಟು ಅ ಮಂಜಾನೆ ಆಗುಂಬೆ ಘಾಟನ್ನಲ್ಲಿ ನಿನ್ನ ಬೆಚ್ಚಗಿನ ಕೈ ಹಿಡೀದು ಒಂದು ಚುರು ಮಾತನಡದೆ ಹದಿನಾಲ್ಕು ಸುತ್ತುಗಳ ಅ ನೀರವತೆಯಲ್ಲಿ  ಕಳೆದು  ಹೋಗ ಬೇಕು.

ಭೋರ್ಗರೆವ ಮಳೆ ನಿಂತ ಅ ಸಂಜೆಯಲಿ ನಿನ್ನ ಜೊತೆ ಹಳೆ ಮನೆಯ ಜಗ್ಗುಲಿಯಲ್ಲಿ  ಸುಮ್ಮನೆ ಕುಳಿತು ಬೇಡದ ಮಾತುಗಳನ್ನ ಆಡಬೇಕಿದೆ ಹಂಚಿನ ಸೂರಿಂದ ದೋ ಎಂದು ಸುರಿತ್ತಿರೊ ನೀರನ್ನ ನಿನ್ನ ಮುಖಕ್ಕೆ ಎರಚಿ ತಮಾಷೆ ನೋಡ ಬೇಕಿದೆ...

ಅ ಹುಣ್ಣಿಮೆ ರಾತ್ರಿನಲ್ಲಿ ನಿನ್ನೊಬ್ಬನ್ನನ್ನೆ ಅಡಿಕೆ ಚಪ್ಪರಕ್ಕೆ ಕರಕ್ಕೊಂಡು ಹೋಗಿ ಚಂದಮಾಮನನ್ನ ತೊರಸಿ..ನಿನ್ನ ಮುದ್ದು ಮುಖವನ್ನ ನನ್ನ ಅಂಗೈ ಭೋಗಸೆಯಲ್ಲಿಟ್ಟು ನಿನ್ನ ಎಷ್ಟು ಪ್ರೀತಿಸುತ್ತಿನಿ ಅಂತ ಹೇಳ ಬೇಕಿದೆ

ಜೋರಾಗಿ ಸುರಿಯೋ ಜಡಿ ಮಳೆಯಲ್ಲಿ ಮನಸಿಗೆ ಸಮಾದಾನವಗೊವಷ್ಟು ನೆನೆದು...ಮಡಿಕೆನಲ್ಲಿ ಕುದಿತ್ತಿರೊ ನೀರಲ್ಲಿ ಮನಸ್ಸಿಗೆ ಹಾಯನಿಸುವಷ್ಟು ಹೊತ್ತು ಮಿಂದು.. ಅಮ್ಮ ಮಾಡಿಕೊಡೊ ಬಿಸಿ ಕಾಫೀನ ದೊಡ್ಡ ಕಪ್ಪಲ್ಲಿ ಹಾಕಿಕೊಂಡು  ನಿನ್ನ ಪಕ್ಕ ಮನೆ ಮುಂದೆ ತೊಟ್ಟೀಕ್ಕೋ ಹನಿಗಳಾನ್ನ ಲೆಕ್ಕ ಹಾಕಿಕ್ಕೋಳುತ್ತ ನಿನಗಂಟ್ಟಿ ಕೂತು ಒಂದೋಂದೆ ಸಿಪ್ ಹೀರುತ್ತ ಬಹುಶಃ ಜಗತ್ತನ್ನೆ ಗೆದ್ದೇ  ಅನ್ನುವಷ್ಟು ಸಂತೊಷ ಪಡಬೇಕು ನಾನು...

ಆ ಜಡೀ ಮಳೆ....  ಈಗಷ್ಟೆ ನಾಟಿ ಮುಗಿಸಿರೊಗದ್ದೆ ... ಆಗುಂಬೆ ಆ ನೀರವ ಸಂಜೆ ...ನವಿಲುಕಲ್ಲಿನ ಮುಂಜಾವು ...ತುಂಗೆಯ ಸದ್ದಿಲ್ಲದ ಹರವು ... ಅ ಹುಣ್ಣಿಮೆ ರಾತ್ರಿಯಲ್ಲಿ ಖಾಲಿ ಇರೊ ನನ್ನ ಮನೆಯ ಚಪ್ಪರ .. ಮಳೆ ನಿಂತ್ತ ನಂತರ ತೋಟ್ಟಿಕ್ಕೋ ಸೂರ ಹನಿ...ಬಿರುಗಾಳಿ ಜೊತೆ ಜೀವ ಊಳಿಸಿಕ್ಕೋಳ್ಳಲು ಹೋರಡೊ ರಸ್ತೆ ಬದಿಯ ರಾಜಣ್ಣನ ಅಂಗಡಿ ಇವೆಲ್ಲ ನಿನ್ನ Abcence..ನ ಮತ್ತೆ ಮತ್ತೆ ಹೇಳುತ್ತೆ ಕಣೊ...

ಯಾವುದೊ ಕಾಫಿಡೇ ನಲ್ಲಿ ಗಂಟೆಗಟ್ಟಲೆ ಕುಳಿತು ಹರಟುವ ಪ್ರೇಮಿಗಳನ್ನ, ಮೆಕ್ ಡೊನಾಲ್ಡಿನಲ್ಲಿ ಇಬ್ಬರು ಒಬ್ಬರೆ ಎಂಬ್ಬಂತ್ತೆ ಅಂಟಿಕುಳಿತು ಮೊಬೈಲ್ ಗೆ ಬಂದಿರೊ ತುಂಟ sms ಗಳನ್ನ ಓದಿ ತಮ್ಮಲ್ಲೆ ನಗುವ ಅ  ಜೋಡಿಗಳು..ಇನ್ನವುದೊ ಪಾರ್ಕನ ಬೆಂಚಿನ ಮೇಲೆ ಕುಳಿತು ಪ್ರಪಂಚ ನಮ್ಮನ್ನ ನೋಡುತ್ತೆ ಅನ್ನುವುದು ಗೊತ್ತಿದ್ದು  ಮೈಮರೆತು ಚುಂಬಿಸುವ ಅ ಇಬ್ಬರನ್ನ ನೋಡಿರುವ ನೀನಗೆ  ನನ್ನೆಲ್ಲ ಆಸೆಗಳು  ತುಂಬ ಸಿಲ್ಲಿ ಅನ್ನಿಸ ಬಹುದು ಆದ್ರೂ ನನ್ಗೆ ಇದೆ ಇಷ್ಟ ಕಣೊ.
ಇವೆಲ್ಲವನ್ನ ಹೇಗೆ ಹೇಳ್ಳೀ ನಿನ್ಗೆ...ಇನ್ನು ಆದೆಷ್ಟೋ ಸಾವಿರ ಸಾವಿರ ಮಾತುಗಳು..ಮನಸ್ಸೆಂಬ ಮನೆಯೊಳಗೆ ಬೆಚ್ಚಗೆ ಮಲಗಿವೆ..ನೀನು ಬಂದ್ರೆ ಎಬ್ಬಿಸ ಬಹುದ್ದಿತ್ತೆನೊ ನೋಡು..:-)...ಬರ್ತಿಯ ಅಲ್ವ..


ಇತಿ ನಿನ್ನೊಲುಮೆಯ.
 ಇಬ್ಬನಿ