Monday, February 13, 2012

ನನ್ನೊಳಗೆ ಉಳಿದ ಮಾತು..

ಈ ನಡುವೆ ಆದ್ಯಾಕೊ ಒಂಟಿ ಆಗಿರೊಕೆ ಬೇಜಾರಗಿದೆ.ನಿನ್ನನ್ನ್ ಮೊದಲ ಬಾರಿ ಊರಿನ
ದಾರಿಯಲ್ಲಿ  ನೋಡು ಆಸೆ ಆಗ್ತಿದೆ.ನನ್ನ ಹತ್ರ ನಿನಗೆ ಅಂತ ಹೇಳಿ ಕ್ಕೊಳ್ಳೊಕೆ ತುಂಬ ವಿಷಯಗಳು ಹುಟ್ಟಿಕ್ಕೊಂಡು ಬಿಟ್ಟಿವೆ ಈಗ..ಆದೆಷ್ಟೊ ಭಾರಿ ಹೇಳಬೇಕು ಅಂದ್ಕೋಂಡ ಮಾತುಗಳು ಬಾಯಿಗೆ ಬರದೆ ಹೊಟ್ಟೆಯೊಳಗೆ ಕರಗಿ ಹೋಗಿದ್ದು ಉಂಟು..ಆದ್ರೆ ಕೆಲವೊಮ್ಮೆ ನಿನ್ನೆದುರು ಬಂದಾಗೆಲ್ಲ ಮಾತು ಮರೆತು ಹೊಗಿದ್ದು ಉಂಟು ಯಾಕೆ ಅಂತ ನಿನ್ಗು ಗೊಂತುಟ್ಟು ಅಲ್ವ...

ಈ ಮನುಷ್ಯನ ಭಾವನೆಗಳೆ ಹೀಗೆ ಅನ್ನಿಸುತ್ತೆ..ವಸ್ತು ಹತ್ತಿರದಲ್ಲಿರೊವಾಗ ಅದು ಬೇಡ ಅನ್ನಿಸಿ ಬಿಡುತ್ತೆ... ಆದ್ರೆ ಅದೇ ವಸ್ತು ದೂರ ಆಗುತ್ತೆ ಅಂತ ಗೊತ್ತದಾಗ ಎಲ್ಲಿಲ್ಲದ ವ್ಯಾಮೋಹ ಬಂದು ಬೀಡುತ್ತೆ.ಹಾಗೆ ನೀನು ಹತ್ತಿರ ಇದ್ದಾಗ ನನ್ಗೆ ನೀನು ಯಾವಗಲು ನನ್ನ ಜೊತೆನೆ ಇರ ಬೇಕೆನಿಸಿರಲಿಲ್ಲ ಆದ್ರೆ ಈಗ ನಿನ್ನ ಸಾಮಿಪ್ಯ ತುಂಬಾನೆ ಬೇಕು ಅನ್ನಿಸುತ್ತಿದೆ....ಸಾವಿರ ಮಾತುಗಳನ್ನ ನಿನ್ಗೆ ಹೇಳೋದಿದೆ...ಬೇಗ ಬಾರೊ..,
ಅದೆಷ್ಟೋ ಸಂಜೆಗಳು ನೀನಿಲ್ಲದೆ ಕಳೆದು ಹೊಗಿವೆ.ನನ್ನ ಮುದ್ದಿನ ಆಗುಂಬೆಯ ಹಾದಿ ಯಾಕೋ ಮೊದಲ ಸರಿ ಹೊಸದೆನು ಇಲ್ಲ  ಎಲ್ಲ ಹಳೆಯದೆ ಅನ್ನಿಸೊಕೆ ಶುರುವಾಗಿದೆ....

ಒಂದು ವೇಳೆ ನೀನು ನನ್ನ ಜೊತೆ ಈಗ ಇಲ್ಲಿ ಇರೊದೆ ಆಗಿದ್ರೆ ಇಳಿ ಸಂಜೆ ಹೊತ್ತಲ್ಲಿ ಒಂದ್ದಿಷ್ಟು ದೂರ ಮನೆ ಮುಂದಿನ ಉಬ್ಬದ ಇಳಿಜಾರಿನಲ್ಲಿ ನನ್ನ ಜೊತೆ ನಡೆದು ಬರ್ತಿಯ ಅಂತ ಕೇಳ ಬೇಕಿತ್ತು...ಉಬ್ಬದ ಇಳಿಜಾರು ಹಳೆಯದೆ ನನಗೇನು ಹೊಸದಲ್ಲ..ಆದರು ನೀನು ಜೊತೆಗಿದ್ದರೆ ಒಂದ್ದಿಷ್ಟು ತಲೆಹರಟೆಯ ಮಾತುಗಳನ್ನ ಆಡಿ..ದಡ್ಡಿ ನೀನು ಇಷ್ಟು ಚಿಕ್ಕ ವಿಷಯನು ಗೊತ್ತಿಲ್ವ ನಿನ್ಗೆ ಅಂತ ತಲೆ ಮೊಟಕಿಸಿಕ್ಕೊಳ್ಳೊ ಆಸೆ ಅಗಿದೆ...


ಕೆಲವೊಮ್ಮೆ ಅನ್ನಿಸಿದ್ದುಂಟು ಅ ಮಂಜಾನೆ ಆಗುಂಬೆ ಘಾಟನ್ನಲ್ಲಿ ನಿನ್ನ ಬೆಚ್ಚಗಿನ ಕೈ ಹಿಡೀದು ಒಂದು ಚುರು ಮಾತನಡದೆ ಹದಿನಾಲ್ಕು ಸುತ್ತುಗಳ ಅ ನೀರವತೆಯಲ್ಲಿ  ಕಳೆದು  ಹೋಗ ಬೇಕು.

ಭೋರ್ಗರೆವ ಮಳೆ ನಿಂತ ಅ ಸಂಜೆಯಲಿ ನಿನ್ನ ಜೊತೆ ಹಳೆ ಮನೆಯ ಜಗ್ಗುಲಿಯಲ್ಲಿ  ಸುಮ್ಮನೆ ಕುಳಿತು ಬೇಡದ ಮಾತುಗಳನ್ನ ಆಡಬೇಕಿದೆ ಹಂಚಿನ ಸೂರಿಂದ ದೋ ಎಂದು ಸುರಿತ್ತಿರೊ ನೀರನ್ನ ನಿನ್ನ ಮುಖಕ್ಕೆ ಎರಚಿ ತಮಾಷೆ ನೋಡ ಬೇಕಿದೆ...

ಅ ಹುಣ್ಣಿಮೆ ರಾತ್ರಿನಲ್ಲಿ ನಿನ್ನೊಬ್ಬನ್ನನ್ನೆ ಅಡಿಕೆ ಚಪ್ಪರಕ್ಕೆ ಕರಕ್ಕೊಂಡು ಹೋಗಿ ಚಂದಮಾಮನನ್ನ ತೊರಸಿ..ನಿನ್ನ ಮುದ್ದು ಮುಖವನ್ನ ನನ್ನ ಅಂಗೈ ಭೋಗಸೆಯಲ್ಲಿಟ್ಟು ನಿನ್ನ ಎಷ್ಟು ಪ್ರೀತಿಸುತ್ತಿನಿ ಅಂತ ಹೇಳ ಬೇಕಿದೆ

ಜೋರಾಗಿ ಸುರಿಯೋ ಜಡಿ ಮಳೆಯಲ್ಲಿ ಮನಸಿಗೆ ಸಮಾದಾನವಗೊವಷ್ಟು ನೆನೆದು...ಮಡಿಕೆನಲ್ಲಿ ಕುದಿತ್ತಿರೊ ನೀರಲ್ಲಿ ಮನಸ್ಸಿಗೆ ಹಾಯನಿಸುವಷ್ಟು ಹೊತ್ತು ಮಿಂದು.. ಅಮ್ಮ ಮಾಡಿಕೊಡೊ ಬಿಸಿ ಕಾಫೀನ ದೊಡ್ಡ ಕಪ್ಪಲ್ಲಿ ಹಾಕಿಕೊಂಡು  ನಿನ್ನ ಪಕ್ಕ ಮನೆ ಮುಂದೆ ತೊಟ್ಟೀಕ್ಕೋ ಹನಿಗಳಾನ್ನ ಲೆಕ್ಕ ಹಾಕಿಕ್ಕೋಳುತ್ತ ನಿನಗಂಟ್ಟಿ ಕೂತು ಒಂದೋಂದೆ ಸಿಪ್ ಹೀರುತ್ತ ಬಹುಶಃ ಜಗತ್ತನ್ನೆ ಗೆದ್ದೇ  ಅನ್ನುವಷ್ಟು ಸಂತೊಷ ಪಡಬೇಕು ನಾನು...

ಆ ಜಡೀ ಮಳೆ....  ಈಗಷ್ಟೆ ನಾಟಿ ಮುಗಿಸಿರೊಗದ್ದೆ ... ಆಗುಂಬೆ ಆ ನೀರವ ಸಂಜೆ ...ನವಿಲುಕಲ್ಲಿನ ಮುಂಜಾವು ...ತುಂಗೆಯ ಸದ್ದಿಲ್ಲದ ಹರವು ... ಅ ಹುಣ್ಣಿಮೆ ರಾತ್ರಿಯಲ್ಲಿ ಖಾಲಿ ಇರೊ ನನ್ನ ಮನೆಯ ಚಪ್ಪರ .. ಮಳೆ ನಿಂತ್ತ ನಂತರ ತೋಟ್ಟಿಕ್ಕೋ ಸೂರ ಹನಿ...ಬಿರುಗಾಳಿ ಜೊತೆ ಜೀವ ಊಳಿಸಿಕ್ಕೋಳ್ಳಲು ಹೋರಡೊ ರಸ್ತೆ ಬದಿಯ ರಾಜಣ್ಣನ ಅಂಗಡಿ ಇವೆಲ್ಲ ನಿನ್ನ Abcence..ನ ಮತ್ತೆ ಮತ್ತೆ ಹೇಳುತ್ತೆ ಕಣೊ...

ಯಾವುದೊ ಕಾಫಿಡೇ ನಲ್ಲಿ ಗಂಟೆಗಟ್ಟಲೆ ಕುಳಿತು ಹರಟುವ ಪ್ರೇಮಿಗಳನ್ನ, ಮೆಕ್ ಡೊನಾಲ್ಡಿನಲ್ಲಿ ಇಬ್ಬರು ಒಬ್ಬರೆ ಎಂಬ್ಬಂತ್ತೆ ಅಂಟಿಕುಳಿತು ಮೊಬೈಲ್ ಗೆ ಬಂದಿರೊ ತುಂಟ sms ಗಳನ್ನ ಓದಿ ತಮ್ಮಲ್ಲೆ ನಗುವ ಅ  ಜೋಡಿಗಳು..ಇನ್ನವುದೊ ಪಾರ್ಕನ ಬೆಂಚಿನ ಮೇಲೆ ಕುಳಿತು ಪ್ರಪಂಚ ನಮ್ಮನ್ನ ನೋಡುತ್ತೆ ಅನ್ನುವುದು ಗೊತ್ತಿದ್ದು  ಮೈಮರೆತು ಚುಂಬಿಸುವ ಅ ಇಬ್ಬರನ್ನ ನೋಡಿರುವ ನೀನಗೆ  ನನ್ನೆಲ್ಲ ಆಸೆಗಳು  ತುಂಬ ಸಿಲ್ಲಿ ಅನ್ನಿಸ ಬಹುದು ಆದ್ರೂ ನನ್ಗೆ ಇದೆ ಇಷ್ಟ ಕಣೊ.
ಇವೆಲ್ಲವನ್ನ ಹೇಗೆ ಹೇಳ್ಳೀ ನಿನ್ಗೆ...ಇನ್ನು ಆದೆಷ್ಟೋ ಸಾವಿರ ಸಾವಿರ ಮಾತುಗಳು..ಮನಸ್ಸೆಂಬ ಮನೆಯೊಳಗೆ ಬೆಚ್ಚಗೆ ಮಲಗಿವೆ..ನೀನು ಬಂದ್ರೆ ಎಬ್ಬಿಸ ಬಹುದ್ದಿತ್ತೆನೊ ನೋಡು..:-)...ಬರ್ತಿಯ ಅಲ್ವ..


ಇತಿ ನಿನ್ನೊಲುಮೆಯ.
 ಇಬ್ಬನಿ


1 comment:

  1. ಇಬ್ಬನಿ

    ತೋಯಿಸುತ್ತಿದೆ :)

    ReplyDelete